ತೌಲನಿಕ ಶಿಕ್ಷಣ -
ಶಿಕ್ಷಣದ ಬಗ್ಗೆ ನಮ್ಮ ಪರಿe್ಞÁನದ ಆಳ ಅಗಲಗಳನ್ನು ಹೆಚ್ಚಿಸಿಕೊಳ್ಳುವುದಕ್ಕೂ ನಮ್ಮ ಶಿಕ್ಷಣ ಸಮಸ್ಯೆಗಳ ಸ್ವರೂಪದ ಬಗ್ಗೆ ಹೆಚ್ಚಿನ ಅರಿವನ್ನು ಪಡೆದುಕೊಳುವದಕ್ಕೂ ಅನ್ಯದೇಶಗಳ ಸಮಕಾಲೀನ ಶಿಕ್ಷಣದ ಸ್ವರೂಪವನ್ನು ನಮ್ಮ ದೇಶದ ಶಿಕ್ಷಣ ಪದ್ಧತಿಯೊಡನೆ ಹೋಲಿಸಿಕೊಂಡು ವ್ಯವಸ್ಥೆಗೊಳಿಸಿರುವ ಶಿಕ್ಷಣ ಶಾಸ್ತ್ರದ ಒಂದು ನೂತನ ಶಾಖೆ.

ಹತೊಂಬತ್ತನೆಯ ಶತಮಾನದಲ್ಲಿ ಹಲವು ರಾಷ್ಟ್ರಗಳು ರಾಷ್ಟ್ರೀಯ ಶಿಕ್ಷಣ ಪದ್ಧತಿಯನ್ನು ವ್ಯವಸ್ಥೆಗೊಳಿಸಲು ಪ್ರಯತ್ನಿಸಿದಾಗ ಈ e್ಞÁನಶಾಖೆ ಆರಂಭವಾಯಿತೆನ್ನಬಹುದು. ತಮ್ಮ ದೇಶದಲ್ಲಿ ಹಿಂದಿನಿಂದ ಅಸ್ತಿತ್ವದಲ್ಲಿದ್ದ ಶಿಕ್ಷಣ ಪದ್ಧತಿಯನ್ನು ಸುಧಾರಿಸುವ ಅಗತ್ಯವನ್ನು ಆಯಾ ದೇಶದ ಅಧಿಕಾರಿಗಳು ಕಂಡುಕೊಂಡರು. ಆ ಬಗ್ಗೆ ಸಲಹೆ ಮಾಡುವ ಮುನ್ನ ಅವರು ಅನ್ಯದೇಶಗಳಲ್ಲಿ ಅಸ್ತಿತ್ವದಲ್ಲಿದ್ದಾಗ ಶಿಕ್ಷಣದ ಸ್ವರೂಪವನ್ನು ಪರಿಚಯ ಮಾಡಿಕೊಳ್ಳಬೇಕಾಯಿತು. ಆದರೂ ಅಲ್ಲಿನ ಜನರು ತಮ್ಮ ಶಿಕ್ಷಣದ ಸಾಂಪ್ರದಾಯಿಕ ಸ್ವರೂಪವನ್ನು ಬಿಡುವುದನ್ನಾಗಲಿ ಅನ್ಯಪದ್ಧತಿಯೊಂದನ್ನು ತಮ್ಮ ದೇಶೀಯ ಪದ್ಧತಿಗೆ ಪೂರಕವೆನಿಸುವಂತೆ ತಂದು ನಾಟಿ ಹಾಕುವುದನ್ನಾಗಲಿ ಸಹಿಸುತ್ತಿರಲಿಲ್ಲ. ಎಲ್ಲ ದೇಶಗಳಲ್ಲೂ ಅನ್ಯದೇಶದ ಶಿಕ್ಷಣ ಪದ್ಧತಿಯನ್ನು ಆಮದು ಮಾಡಿಕೊಳ್ಳುವ ಬಗ್ಗೆ ಪ್ರತಿಭಟನೆ ಇದ್ದರೂ ಕೆಲವು ದೇಶಗಳ ಶಿಕ್ಷಣವೇತ್ತರು ಚಯನಾತ್ಮಕವಾಗಿ ಅನ್ಯ ಪದ್ಧತಿಗಳಿಂದ ಆಯ್ದ ಲಕ್ಷಣಗಳನ್ನು ಬಳಸಿಕೊಂಡು ತಮ್ಮ ಶಿಕ್ಷಣ ಪದ್ಧತಿಯನ್ನು ಸುಧಾರಿಸುವುದು ಲಾಭದಾಯಕವೆಂದು ಭಾವಿಸಿದ್ದರು. ಅಮೆರಿಕದ ಸಂಯುಕ್ತ ಸಂಸ್ಥಾನಗಳಲ್ಲಿ ಜರ್ಮನ್ ಶಿಕ್ಷಣ ಪದ್ಧತಿಯ ಬೋಧನ ವಿಧಾನವನ್ನೂ ತರಗತಿಯ ಶಿಸ್ತನ್ನೂ ಅನುಷ್ಠಾನಕ್ಕೆ ತರಲು ಆಸಕ್ತಿ ತೋರಿಸಿದರು. ಇಂಗ್ಲೆಂಡು ಫ್ರೆಂಚ್ ಮಾದರಿಯಲ್ಲಿ ಪ್ರೌಢಶಾಲೆಗಳನ್ನು ವ್ಯವಸ್ಥೆಗೊಳಿಸುವುದು ಅಗತ್ಯವೆಂದು ತೀರ್ಮಾನಿಸಿತು. ಮೈಕೇಲ್ ಸ್ಯಾಡ್ಲರ್ ಮತ್ತು ಡಬ್ಲ್ಯೂ.ಟಿ. ಹ್ಯಾರಿಸ್ ತೌಲನಿಕವಾಗಿ ಶಿಕ್ಷಣ ಪದ್ಧತಿಗಳ ವ್ಯಾಸಂಗದಿಂದ ವಾಸ್ತವ ರೀತಿಯ ಶಿಕ್ಷಣ ಸಿದ್ಧಾಂತಗಳನ್ನು ರೂಪಿಸುವುದಕ್ಕಾಗಿ ಶಿಕ್ಷಣದ ಬಗ್ಗೆ ರಾಷ್ಟ್ರೀಯ ನೀತಿಯನ್ನು ನಿರೂಪಿಸುವುದಕ್ಕೂ ಅನುಕೂಲವಾಗುವದೆಂದು ಸಲಹೆ ಮಾಡಿದರು. ಜೊತೆಗೆ ಅಂಥ ನೂತನ e್ಞÁನಶಾಖೆಯನ್ನು ಅಭಿವೃದ್ಧಿಪಡಿಸುವುದರಲ್ಲಿ ಆ ಕ್ಷೇತ್ರದಲ್ಲಿ ಕೈಗೊಳ್ಳಬಹುದಾದ ಸುಧಾರಣೆಗಳಿಗೆ ಉದ್ದೇಶಿತ ಅಂಶಗಳನ್ನು ಸಾಧಿಸಬಲ್ಲ ಯಶಸ್ಸನ್ನು ದೊರಕಿಸಿಕೊಡಬಹುದೆಂದೂ ಸೂಚಿಸಿದರು.

ಮೇಲಿನ ಪ್ರವೃತ್ತಿಗಳೊಡನೆ ಅನ್ಯದೇಶಗಳ ಶಿಕ್ಷಣಪದ್ಧತಿಗಳ ಬಗ್ಗೆ ಆಧಾರಾಂಶಗಳನ್ನು ಸಂಗ್ರಹಿಸಿ ಪರಿಮಾಣಾತ್ಮಕ ಮತ್ತು ಗುಣಾತ್ಮಕ ಅನುಮೇಯಗಳನ್ನು ರೂಢಿಸಿಕೊಂಡು ಆ ಮೂಲಕ ಭವಿಷ್ಯ ಸೂಚಿಸಬಲ್ಲ (ಪ್ರಿಡಿಕ್ಟೀವ್) ಶಿಕ್ಷಣದ ವಿe್ಞÁನವೊಂದನ್ನು ರೂಪಿಸುವ ಯತ್ನ ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್ ಮುಂತಾದ ದೇಶಗಳಲ್ಲಿ ನಡೆಯಿತು. ಆಗ ಯಾವ ದೇಶದಲ್ಲೇ ಆಗಲಿ ಅಲ್ಲಿನ ಶಿಕ್ಷಣದ ಸ್ವರೂಪ ಬಹುಮಟ್ಟಿಗೆ ಐತಿಹಾಸಿಕ ಸಂಪ್ರದಾಯಗಳನ್ನನುಸರಿಸಿ ಬೆಳೆಯುವುದೆಂದು ಭಾವಿಸಿದ್ದರೂ ಸಮಾಜ ಶಾಸ್ತ್ರೀಯ ರೀತಿಯಲ್ಲಿ ಮುನ್ಸೂಚನೆ ನೀಡಲು ಬಳಸುವ ನಿರ್ದಿಷ್ಟ ಯತ್ನ ನಡೆಯಿತು.

ತೌಲನಿಕ ಶಿಕ್ಷಣದ ವ್ಯಾಸಂಗದ ಉದ್ದೇಶದ ಬಗ್ಗೆ ವಿವಿಧ ಅಭಿಪ್ರಾಯಗಳು ಪ್ರಚಾರದಲ್ಲಿದ್ದರೂ ಅವೆಲ್ಲವನ್ನೂ ಸಮನ್ವಯಗೊಳಿಸಿಕೊಂಡೆರೆ ನಾಲ್ಕು ಪ್ರಮುಖ ಉದ್ದೇಶಗಳನ್ನು ಗುರುತಿಸಬಹುದು; ಅದರಿಂದ ಮೊದಲನೆಯದಾಗಿ, ಶಿಕ್ಷಣದ ಬಗ್ಗೆ ಹೆಚ್ಚಿನ ಪರಿe್ಞÁನ ದೊರಕಬೇಕು; ಎರಡನೆಯದಾಗಿ, ಯಾವುದಾದರೂ ಒಂದು ಶಿಕ್ಷಣ ಪದ್ಧತಿ ಹೇಗೆ ಆ ಸ್ವರೂಪವನ್ನು ತಾಳಿತೆಂದು ವಿವರಿಸಲು ಅವಕಾಶವಾಗಬೇಕು; ಮೂರನೆಯದಾಗಿ, ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆಗಳೂ ಯೋಜನೆಗಳೂ ಕಾರ್ಯರೂಪಕ್ಕೆ ಬರುವಂತೆ ಮಾಡಲು ಅದರಿಂದ ನೆರವು ದೊರಕಬೇಕು; ಕೊನೆಯದಾಗಿ, ತೌಲನಿಕ ಶಿಕ್ಷಣದ ಅಧ್ಯಯನಕಾರರಲ್ಲಿ ಅಂತರರಾಷ್ಟ್ರೀಯ ಸೌಹಾರ್ದವನ್ನೂ ವಿಹಿತ ಮನೋಭಾವವನ್ನೂ ಮೂಡಿಸಬೇಕು. ಈಚೆಗೆ ಅನ್ಯದೇಶಗಳ ಶಿಕ್ಷಣ ಪದ್ಧತಿಯನ್ನೂ ಅಭ್ಯಾಸ ಮಾಡುವುದೂ ಅವುಗಳಲ್ಲಿ ಕಂಡುಬರುವ ಸಾಮ್ಯಾಸಾಮ್ಯಗಳಿಗೆ ಕಾರಣಗಳನ್ನು ಹುಡುಕುವುದೂ ವಿಶ್ವವಿದ್ಯಾಲಯಗಳಲ್ಲಿ ಆಸಕ್ತಿಯ ವಿಷಯವಾಗುತ್ತ ಬರುತ್ತಿವೆ. ಈ ಶತಮಾನದ ಆದಿಯಲ್ಲಿ ನ್ಯೂಯಾರ್ಕಿನ ಕೊಲಂಬಿಯ ವಿಶ್ವವಿದ್ಯಾಲಯದ ಐ.ಎಲ್. ಕ್ಯಾಂಡಲ್, ಲಂಡನ್ನಿನ ಕಿಂಗ್ಸ್ ಕಾಲೇಜಿನ ನಿಕಲಾಸ್ ಹ್ಯಾನ್ಸ್ ಮತ್ತು ಜರ್ಮನಿಯ ಮ್ಯೂನಿಚ್ ವಿಶ್ವವಿದ್ಯಾಲಯದ ಫ್ರೆಡ್ರಿಕ್ ಸ್ನೈಡರ್ ಶೈಕ್ಷಣಿಕ ಸಿದ್ಧಾಂತ ಮತ್ತು ಅನುಷ್ಠಾನಗಳ ಬೆಳವಣಿಗೆಯಲ್ಲಿ ಪೂರ್ವ ಕಾರಣಗಳನ್ನು ಅರಸುವ ಅಧ್ಯಯನವನ್ನು ಕೈಗೊಂಡರು. ಅವರು ಶಿಕ್ಷಣದ ಬೆಳೆವಣಿಗೆಯಲ್ಲಿ ಭಾವನೆಗಳ ಪ್ರಭಾವಕ್ಕೆ ಪ್ರಾಧಾನ್ಯವಿತ್ತು ಇತರ ಕಾರಣಗಳನ್ನು ಕಡೆಗಣಿಸಿದ್ದುರು. ಆದರೆ ಲಂಡನ್ ವಿಶ್ವವಿದ್ಯಾಲಯದ ಪ್ರೊ. ಜೋಸೆಫ್ ಎ. ಲಾರಿಸ್. ಮತ್ತು ಕೊಲಂಬಿಯ ವಿಶ್ವವಿದ್ಯಾಲಯದ ರಾಬರ್ಟ ಕಿಂಗ್ ಹಾಲ್ ಅದಕ್ಕೆ ಸಮಾಜಶಾಸ್ತ್ರೀಯವೆನ್ನಬಹುದಾದ ಕಾರಣಗಳನ್ನು ಸೂಚಿಸಿದ್ದರು. ಎರಡನೆಯ ಮಹಾಯುದ್ಧದ ಅನಂತರ ತತ್ತ್ವಶಾಸ್ತ್ರ, ಮನೋವಿe್ಞÁನ, ಅರ್ಥಶಾಸ್ತ್ರ ಮುಂತಾದ ಕ್ಷೇತ್ರಗಳ ತಂತ್ರಗಳನ್ನೂ ಅಳವಡಿಸಿಕೊಂಡು ತೌಲನಿಕ ಶಿಕ್ಷಣವನ್ನು ರೂಢಿಸುವ ಯತ್ನ ನಡೆದಿದೆ. ವಿಷಯದ ವ್ಯಾಪಕವಾದ ಅಧ್ಯಯನಕ್ಕೆ ಮೇಲಿನ ಯಾವೊಂದು ವಿಧಾನವೂ ಪೂರ್ಣವಾಗಿ ಉಚಿತವಲ್ಲವೆಂದು ಅರಿವಾದಂತೆ ಈಚೆಗೆ ಅಂತರ ವಿಷಯ (ಇಂಟರ್ ಡಿಸಿಪ್ಲಿನರಿ) ತಂತ್ರದ ವಿಧಾನವನ್ನು ಅನುಸರಿಸಲಾಗುತ್ತಿದೆ. ಷಿಕಾಗೊ, ಕೊಲಂಬಿಯ, ನ್ಯಾಷವಿಲ್, ನ್ಯೂ ಯಾರ್ಕ್, ಪೆನ್ಸಿಲ್ವೇನಿಯ, ಪಿಟ್ಸ್‍ಬರ್ಗ್, ಬರ್ಲಿನ್, ಹ್ಯಾಂಬರ್ಗ್, ಮ್ಯೂನಿಚ್, ಲಂಡನ್, ಲೀಡ್ಸ್, ರೇಡಿಂಗ್, ಕಿಯೂಷು ಮುಂತಾದ ವಿಶ್ವವಿದ್ಯಾಲಯಗಳು ತೌಲನಿಕ ಶಿಕ್ಷಣವನ್ನು ಒಂದು ಅಧ್ಯಯನ ವಿಷಯವಾಗಿ ಗೊತ್ತುಮಾಡಿವೆ. ಭಾರತದಲ್ಲಿ ಈಚೆಗೆ ಬಹುತೇಕ ವಿಶ್ವವಿದ್ಯಾಲಯಗಳು ಈ ವಿಷಯವನ್ನು ಪದವೀಮಟ್ಟದಲ್ಲೂ ಸ್ನಾತಕೋತ್ತರ ಮಟ್ಟದಲ್ಲೂ ಪಠ್ಯಕ್ರಮದಲ್ಲಿ ಸೇರಿಸಿಕೊಂಡಿದೆ.

ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಘ ಸಂಸ್ಥೆಗಳು ತೌಲನಿಕ ಶಿಕ್ಷಣವನ್ನು ಕುರಿತು ಅನೇಕ ಸಾಕ್ಷ್ಯಗ್ರಂಥಗಳನ್ನು ಪ್ರಕಟಿಸಿವೆ. 1930ರಲ್ಲಿ ಜಿನೀವದಲ್ಲಿ ಆರಂಭವಾದ ಅಂತರ ರಾಷ್ಟ್ರೀಯ ಶಿಕ್ಷಣ ಕಛೇರಿ (ಇಂಟರ್‍ನ್ಯಾಷನಲ್ ಬ್ಯೂರೋ ಆಫ್ ಎಜುಕೇಷನ್) ಪ್ರತಿವರ್ಷವೂ ಪ್ರಪಂಚದ ವಿವಿಧ ರಾಷ್ಟ್ರಗಳ ಶಿಕ್ಷಣ ಸಚಿವಾಲಯದವರನ್ನು ಆಹ್ವಾನಿಸಿ ಆಯ್ದ ಒಂದು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿಚಾರಗೋಷ್ಠಿಯನ್ನು ನಡೆಸಿ, ಅದರ ತೀರ್ಮಾನಗಳನ್ನು ಒಂದು ಅಂತರರಾಷ್ಟ್ರೀಯ ಶಿಕ್ಷಣದ ವಾರ್ಷಿಕ ಸಂಚಿಕೆಯ (ಇಯರ್ ಬುಕ್ ಆಫ್ ಎಜುಕೇಷನ್) ರೂಪದಲ್ಲಿ ಪ್ರಕಟಿಸುತ್ತ ಬಂದಿದೆ; ಈ ಸಂಚಿಕೆಗಳ ಮೂಲಕ ಆ ಸಂಸ್ಥೆ ಅಂತರರಾಷ್ಟ್ರೀಯ ಶಿಕ್ಷಣ ಕ್ಷೇತ್ರದಲ್ಲಿ ಕಂಡುಬರುವ ಪ್ರವೃತ್ತಿಗಳನ್ನೂ ರಾಷ್ಟ್ರ ರಾಷ್ಟ್ರಗಳ ಶಿಕ್ಷಣದ ಬೆಳವಣಿಗೆಯಲ್ಲಿ ಕಂಡುಬರುವ ವ್ಯತ್ಯಾಸಗಳನ್ನೂ ಬೆಳಕಿಗೆ ತಂದು ತೌಲನಿಕ ಶಿಕ್ಷಣದ ಅಭಿವೃದ್ಧಿಗೆ ಸಹಾಯ ಮಾಡುತ್ತಿದೆ.

ಯುನೆಸ್ಕೊ ಸಂಸ್ಥೆಯೂ ತೌಲನಿಕ ಶಿಕ್ಷಣದ ಪ್ರಗತಿಗೆ ವಿವಿಧರೂಪದಲ್ಲಿ ನೆರವಾಗುತ್ತಿದೆ. ಬೇರೆ ಬೇರೆ ದೇಶಗಳ ಶಿಕ್ಷಣಪದ್ಧತಿಯ ವಿವಿಧ ಮುಖಗಳನ್ನು ಕುರಿತು ಅಧ್ಯಯನ ನಡೆಸಿ ಅನೇಕ ಮೌಲಿಕ ಕೃತಿಗಳನ್ನೂ ಪ್ರಾಥಮಿಕ, ಪ್ರೌಢ ಮತ್ತು ಉನ್ನತ ಶಿಕ್ಷಣವನ್ನು ಕುರಿತ ಪ್ರತ್ಯೇಕ ಗ್ರಂಥಗಳನ್ನೂ ಪ್ರಕಟಿಸಿದೆ. ಅವುಗಳಲ್ಲಿ ಪ್ರಪಂಚದ ಶಿಕ್ಷಣದ ಸಮೀಕ್ಷೆ (ವಲ್ರ್ಡ್ ಸರ್ವೆ ಆಫ್ ಎಜುಕೇಷನ್) ಎಂಬ ಕೃತಿ ಬಹುಮುಖ್ಯವಾದ್ದಾಗಿದ್ದು ಸುಮಾರು ಇನ್ನೂರು ದೇಶಗಳ ಶಿಕ್ಷಣವನ್ನು ಕುರಿತು ಸಂಗ್ರಹವಾಗಿ ವಿವರಣೆಯನ್ನೊದಗಿಸಿದೆ ;
ಅದರ ಅಂಗಸಂಸ್ಥೆಯಾದ ಶೈಕ್ಷಣಿಕ ಆಯೋಜನಾ ಪರಿಷತ್ತು (ಕೌನ್ಸಿಲ್ ಆಫ್ ಎಜುಕೇಷನಲ್ ಪ್ಲ್ಯಾನಿಂಗ್) ಅದರ ಪ್ರಾದೇಶಿಕ ಸಂಸ್ಥೆಗಳಾದ ಕೌನ್ಸಿಲ್ ಆಫ್ ಯುರೋಪ್ ಮತ್ತು ಪ್ಯಾನ ಅಮೇರಿಕನ್ ಯೂನಿಯನ್ ಆರ್ಗನೈಜೇóಷನ್ ಫಾರ್ ಎಕನಾಮಿಕ್ ಕೋಆಪರೇಷನ್ ಅಂಡ್ ಡೆವಲಪ್‍ಮೆಂಟ್ ಮುಂತಾದ ಸಂಸ್ಥೆಗಳು ತಮ್ಮ ತಮ್ಮ ಪ್ರಾದೇಶಿಕ ವ್ಯಾಪ್ತಿಯ ರಾಷ್ಟ್ರಗಳಲ್ಲಿ ಅಧ್ಯಾಪಕರ ನೇಮಕವೇ ಮುಂತಾದ ವಿಷಯಗಳನ್ನು ಕುರಿತು ಪ್ರಕಟಣೆಗಳನ್ನು ಹೊರಡಿಸಿವೆ. ತೌಲನಿಕ ಶಿಕ್ಷಣದ ವ್ಯಾಸಂಗಕ್ಕೆ ನೆರವಾಗುವ ವಿಫುಲವಾದ ಇಂಥ ಸಾಹಿತ್ಯವನ್ನು ಪ್ರಕಟಿಸಿರುವುದರ ಜೊತೆಗೆ ಯುನೆಸ್ಕೊ ಮತ್ತು ಅದರ ಅಂಗಸಂಸ್ಥೆಗಳು ಅಗತ್ಯವಾದೆಡೆಗೆ ತನ್ನ ತಜ್ಞರ ತಂಡವನ್ನು ಕಳುಹಿಸಿ ಸಲಹಾ ಸೇವೆಯನ್ನೂ ಒದಗಿಸುತ್ತಿದೆ.

ಶತಶತಮಾನಗಳಿಂದ ವಸಾಹತುಗಳಾಗಿದ್ದು ಎರಡನೆಯ ಮಹಾಯುದ್ಧದ ಅನಂತರ ಸ್ವಾತಂತ್ರ್ಯವನ್ನು ಪಡೆದ ರಾಷ್ಟ್ರಗಳು ಸಾರ್ವತ್ರಿಕ ಪ್ರಾಥಮಿಕ ಶಿಕ್ಷಣವನ್ನು ಆಚರಣೆಗೆ ತರುವ ಉತ್ಸಾಹದಲ್ಲಿ `ಶಿಕ್ಷಣ ವ್ಯಕ್ತಿಗೆ ಜನ್ಮಗತವಾಗಿ ಬಂದ ಹಕ್ಕು ಎಂಬ ವಾದವನ್ನು ಪ್ರಚಾರಮಾಡಹತ್ತಿದ್ದವು. ಈ ವಾದವನ್ನು ಯುರೋಪಿನ ತೌಲನಿಕ ಶಿಕ್ಚಣತಜ್ಞರು ನಿಷ್ಠೆಯಿಂದ ಕಾರ್ಯರೂಪಕ್ಕೆ ತರುವ ಬಗ್ಗೆ ಭೀತಿಯನ್ನು ವ್ಯಕ್ತಪಡಿಸಿದರು. ಈ ತತ್ತ್ವವನ್ನು ಪ್ರೌಢಶಿಕ್ಷಣಕ್ಕೆ ಅನ್ವಯಿಸುವಾಗ ಇಂಗ್ಲೆಂಡಿನ ಶಿಕ್ಷಣವೇತ್ತರಲ್ಲಿ ಭಿನ್ನಾಭಿಪ್ರಾಯ ತಲೆದೋರಿತು. 1960ರ ಸುಮಾರಿಗೆ ಉನ್ನತಶಿಕ್ಷಣಕ್ಕೂ ಈ ವಾದವನ್ನು ಅನ್ವಯಿಸಿದಾಗ ಎಲ್ಲ ರಾಷ್ಟ್ರಗಳಲ್ಲೂ ಬಗೆಬಗೆಯ ತೊಡಕುಗಳು ಉದ್ಭವಿಸಿದವು. ಆ ಸುಮಾರಿನಲ್ಲಿ ಯುನೆಸ್ಕೊ `ಆಗ್ನೇಯ ಏಷ್ಯಾದ ರಾಷ್ಟ್ರಗಳಲ್ಲಿ ಉನ್ನತ ಶಿಕ್ಷಣಕ್ಕೆ ಪ್ರವೇಶ ಮತ್ತು ಅದರ ಬೆಳವಣಿಗೆ ಎಂಬ ಗ್ರಂಥವನ್ನು ಪ್ರಕಟಿಸಿ ಆ ಸಮಸ್ಯೆಗಳ ಬಗ್ಗೆ ಅಭಿವೃದ್ಧಿಶೀಲ ರಾಷ್ಟ್ರಗಳ ಗಮನವನ್ನು ಸೆಳೆಯಿತು. ಆ ಸುಮಾರಿಗೆ ತಾಂತ್ರಿಕ ಕ್ಷೇತ್ರದಲ್ಲಿ ಆರಂಭವಾಗಿದ್ದ ಪ್ರಗತಿ ಮತ್ತು ನಿಯೋಜಿತ ಅರ್ಥ ವ್ಯವಸ್ಥೆಯ (ಪ್ಲಾನ್ಡ್ ಎಕಾನಮಿ) ನಾಡುಗಳಿಗೆ ಮಾನವಶಕ್ತಿಯ ಸಮಸ್ಯೆ ಪ್ರಾಧಾನ್ಯಕ್ಕೆ ಬಂತು. ಅಗತ್ಯಕ್ಕೆ ತಕ್ಕಂತೆ ತಾಂತ್ರಿಕ ಮತ್ತು ಇತರ ಕ್ಷೇತ್ರಗಳ ಸಿಬ್ಬಂದಿಯನ್ನು ರೂಪಿಸಲು ಶಿಕ್ಷಣ ಅಗತ್ಯವಾಯಿತು. ಭಾರತದಲ್ಲೂ ಇಂಥ ಯೋಜನೆಗಳು ರೂಪುಗೊಳ್ಳುತ್ತಿವೆ. ಆ ಯೋಜನೆಯ ಆಯೋಗಗಳಲ್ಲಿ ಗರಿಷ್ಠ ವ್ಯಕ್ತಿಗಳಾಗಿ ಕೂರುತ್ತಿದ್ದ ಅರ್ಥಶಾಸ್ತ್ರಜ್ಞರು ಶಿಕ್ಷಣಕ್ಕಾಗಿ ಬಂದ ಅಗಾಧ ಪ್ರಮಾಣದ ಹಣದ ಬೇಡಿಕೆಯನ್ನು ಕಂಡು ಅದರಿಂದ ಬರತಕ್ಕ ಆದಾಯದ ಬಗ್ಗೆ ಲೆಕ್ಕ ಹಾಕಲಾರಂಭಿಸಿ ಶಿಕ್ಷಣ ಬಂಡವಾಳ ಹೂಡಿಕೆಯ ಉದ್ಯಮದ ರೂಪವನ್ನು ತಾಳಿ ಆ ಕ್ಷೇತ್ರದಲ್ಲಿಗೊಂದಲ ಆರಂಭವಾಯಿತು. ಆ ಗೊಂದಲದ ಪರಿಹಾರಕ್ಕೆ ಯುನೆಸ್ಕೊ ಪ್ರಕಟಿಸಿದ ಮೇಲಿನ ವರದಿ ತುಂಬ ನೆರವಾಯಿತೆನ್ನಬಹುದು.

ಯುದ್ಧಾನಂತರ ದಿನಗಳಲ್ಲಿ ವಿಶ್ವವಿದ್ಯಾಲಯಗಳಲ್ಲೂ ಕಾಲೇಜುಗಳಲ್ಲೂ ತೌಲನಿಕ ಶಿಕ್ಷಣದ ಪಠ್ಯಕ್ರಮ ತುಂಬ ಜನಪ್ರಿಯವಾಗುತ್ತ ಬರುತ್ತಿದೆ. ಮುಖ್ಯವಾಗಿ ಅದರ ಅಧ್ಯಯನದಿಂದ ವಿದ್ಯಾರ್ಥಿಗಳು , 1 ತಮ್ಮ ಶಾಲಾ ಪದ್ದತಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು. 2 ಅನ್ಯದೇಶಗಳ ಶಾಲೆಗಳ ಬಗ್ಗೆ ತಿಳಿವಳಿಕೆ ಪಡೆಯಬಹುದು; 3 ಅಂತರರಾಷ್ಟ್ರೀಯ ಮನೋಭಾವವನ್ನು ಬೆಳೆಸಿಕೊಳ್ಳಬಹುದು; ಕೆಲವು ಕಾಲೇಜುಗಳಲ್ಲಿ ಬೇರೆ ಬೇರೆ ದೇಶಗಳಲ್ಲಿ ಏಕೆ ಶಿಕ್ಷಣ ಬೇರೆ ಬೇರೆ ರೀತಿಯಾಗಿದೆ ಎಂಬುದನ್ನು ವಿವರವಾಗಿ ವ್ಯಾಸಂಗಮಾಡುವ ಮೂಲಕ ಅಲ್ಲಿನ ಶಿಕ್ಷಣ ಪದ್ಧತಿಯ ವೈಶಿಷ್ಟ್ಯಗಳಿಗೆ ಆಯಾ ಜನಾಂಗದ ರಾಷ್ಟ್ರೀಯ ಗುಣಗಳೇ ಕಾರಣವೆಂಬುದನ್ನು ಅರಿತುಕೊಳ್ಳಬಹುದು. ಫ್ರೆಂಚರು ತಾರ್ಕಿಕರು, ವಿವೇಚನೆಯುಳ್ಳವರು, ರಚನಾಚತುರರು, ಅಮೆರಿಕದವರು ಫಲಪರಿಣಾಮವಾದಿಗಳು ಮತ್ತು ಅಗಾಧವಾದ ತಂತ್ರe್ಞÁನವುಳ್ಳವರು ಹಾಗೂ ಬದಲಾವಣೆಯಲ್ಲಿ ಆಸಕ್ತಿಯುಳ್ಳವರು ; ಇಂಗ್ಲಿಷರು ಸಂಪ್ರದಾಯಬದ್ಧರು ಮಧ್ಯಸ್ಥ ಪ್ರವೃತ್ತಿಯವರು ಎಚ್ಚರಿಕೆಯಿಂದ ಪ್ರಗತಿಪಥದಲ್ಲಿ ಕಾಲಿಡುತ್ತ ಜನಮನಕ್ಕೆ ಮನ್ನಣೆಯೀಯತಕ್ಕವರು ; ಭಾರತೀಯರು ಆಧ್ಯಾತ್ಮಿಕ ಪ್ರವೃತ್ತಿಯುಳ್ಳವರು, ತ್ಯಾಗ, ಸತ್ಯ ಅಹಿಂಸೆಗಳಲ್ಲಿ ನಿಷ್ಠೆಯುಳ್ಳವರು. ರಷ್ಯನರು ನಿರ್ದೇಶಿತ ಮುಂದಿನ ಜೀವನ ನಡೆಸತಕ್ಕವರು ಈ ವಿಶಿಷ್ಟ ಲಕ್ಷಣಗಳು ಆಯಾ ದೇಶದ ರಾಷ್ಟ್ರೀಯ ಶಿಕ್ಷಣವನ್ನು ರೂಪಿಸಲು ನೆರವಾಗಿವೆ. ಇನ್ನು ಕೆಲವು ದೇಶಗಳ ಕಾಲೇಜುಗಳು ಆಯಾ ದೇಶಗಳ ಶಿಕ್ಷಣ ಪದ್ಧತಿಯ ವಿವರಣಾತ್ಮಕ ಅಧ್ಯಯನಕ್ಕೆ ಅವಕಾಶ ಕಲ್ಪಿಸಿರುವವು. ಡೆನ್ಮಾರ್ಕ್, ಫ್ರಾನ್ಸ್, ಇಂಗ್ಲೆಂಡ್, ಅಮೇರಿಕದ ಸಂಯುಕ್ತಸಂಸ್ಥಾನಗಳು, ರಷ್ಯ, ಭಾರತ ಮುಂತಾದ ದೇಶಗಳ ಶಿಕ್ಷಣ ಪದ್ಧತಿಯನ್ನು ಸಾಮಾನ್ಯವಾಗಿ ಬೋಧಿಸಲಾಗುವುದು. ಮತ್ತೆ ಕೆಲವು ಕಾಲೇಜುಗಳಲ್ಲಿ ಶಿಕ್ಷಣದ ನೀತಿ ನಿರೂಪಣೆಯಲ್ಲಿ ಭಾಷೆ, ಜಾತಿ ರಾಜಕೀಯ ಪದ್ಧತಿ, ಜೀವನಧ್ಯೇಯ ಮತೀಯ ದೃಷ್ಟಿ - ಇವು ಬೀರುವ ಪ್ರಭಾವವನ್ನು ತುಲನಾತ್ಮಕವಾಗಿ ಬೋಧಿಸುವರು. ದಕ್ಷಿಣ ಆಫ್ರಿಕದಲ್ಲೂ ನ್ಯೂಜಿಲೆಂಡಿನಲ್ಲೂ ಜನಾಂಗನೀತಿಯೂ ಬೆಲ್ಜಿಯಂ ರಷ್ಯ ಭಾರತಗಳಲ್ಲ ಭಾಷಾ ವೈವಿದ್ಯವೂ, ಇಂಗ್ಲೆಂಡ್, ಫ್ರಾನ್ಸ್ ಮತ್ತು ಅಮೇರಿಕದ ಸಂಯುಕ್ತಸಂಸ್ಥಾನಗಳಲ್ಲಿ ಮತೀಯ ವ್ಯತ್ಯಾಸಗಳೂ ಶಿಕ್ಷಣನೀತಿಯ ಮೇಲೆ ಪ್ರಭಾವ ಬೀರುತ್ತದೆ. 

ಮೇಲೆ ಸೂಚಿಸಿದ ಮೂರು ವಿಧಾನಗಳಲ್ಲಿ ತೌಲನಿಕ ಶಿಕ್ಷಣವನ್ನು ಅಭ್ಯಸಿಸಲು ನೆರವಾಗುವಂತೆ ಸೂಕ್ತರೀತಿಯ ಪಠ್ಯಪುಸ್ತಕಗಳೂ ಅಸ್ತಿತ್ವಕ್ಕೆ ಬಂದಿವೆ.

ತೌಲನಿಕ ಶಿಕ್ಷಣದ ಸಂಶೋಧನೆಗಳು ಬಹುಮಟ್ಟಿಗೆ ಡಾಕ್ಟೊರಲ್ ಪ್ರಬಂಧ, ನಿಬಂಧಗಳ ರೂಪದಲ್ಲಿ ನಡೆಯುತ್ತಿವೆ. ಅದಕ್ಕೆ ಈಚೆಗೆ ಎಲ್ಲ ದೇಶಗಳಲ್ಲೂ ಆರಂಭವಾಗಿರುವ ಸಾರ್ವತ್ರಿಕ ಶಿಕ್ಷಣದ ಸುಧಾರಣೆಯೂ ವಿಸ್ತರಣ ಕಾರ್ಯವೂ ಅಗತ್ಯವೆನಿಸುವ ಸಂಶೋಧನ ವಸ್ತುವನ್ನು ಒದಗಿಸುತ್ತವೆ. ಲಂಡನ್, ರೆಡಿಂಗ್, ನ್ಯೂ ಯಾರ್ಕ್, ಮಿಚಿಗನ್, ದೆಹಲಿ ಮುಂತಾದ ವಿಶ್ವವಿದ್ಯಾಲಯಗಳಲ್ಲಿ, ಈ ಕ್ಷೇತ್ರದಲ್ಲಿ ಹಲವು ಪ್ರಮುಖ ಸಂಶೋಧನೆಗಳು ನಡೆದಿವೆ. ಪ್ರಪಂಚದ ಇತರೆಡೆಗಳಲ್ಲೂ ಆ ಮುಖವಾದ ಸಂಶೋಧನೆಗಳು ನಡೆಯುತ್ತಿವೆ.

ಈಚೆಗೆ ತೌಲನಿಕ ಶಿಕ್ಷಣವನ್ನು ಒಂದು ಅನ್ವಯಿಕ e್ಞÁನಶಾಖೆಯಾಗಿ ಅಭಿವೃದ್ಧಿಪಡಿಸುವ ಕಡೆ ಗಮನ ಹರಿಸಲಾಗುತ್ತಿದೆ. ಮುಂದುವರಿದ ರಾಷ್ಟ್ರಗಳಲ್ಲಿ ಸಾಂಸ್ಕøತಿಕ, ಔದ್ಯೋಗಿಕ ತಾಂತ್ರಿಕ ಹಾಗೂ ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುವ ಅದರಲ್ಲೂ ಅಗತ್ಯ ಜನಬಲವನ್ನು ಒದಗಿಸಿಕೊಳ್ಳುತ್ತಿರುವ ಅಂಶವನ್ನು ಅಧ್ಯಯನ ಮಾಡಿ ಅದೇ ರೀತಿಯಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳ ಸಮಸ್ಯೆಗಳನ್ನೂ ಪರಿಹರಿಸಲು ನೆರವಾಗುವ ವಾಸ್ತವಿಕ ತಂತ್ರe್ಞÁನವನ್ನೂ ರೂಢಿಸಿಕೊಡಲು ತೀವ್ರರೀತಿಯ ಯತ್ನ ನಡೆಯುತ್ತಿದೆ. ಯೋಜನೆಗಳ ಮೂಲಕ ರಾಷ್ಟ್ರದ ಸರ್ವತೋಮುಖವಾದ ಅಭಿವೃದ್ಧಿಗೆ ತೌಲನಿಕ ಶಿಕ್ಷಣದ ಸಾರ್ವತ್ರಿಕ ನಿಯಮಗಳನ್ನು ಬಳಸಿಕೊಳ್ಳುವ ಯತ್ನವೂ ನಡೆದಿದೆ. ಉದ್ದೇಶಿತ ಗುರಿಯನ್ನು ಸಾಧಿಸಲು ಅನ್ಯದೇಶಗಳು ಅನುಸರಿಸುತ್ತಿರುವ ವಿಧಾನಗಳ ಆಧಾರದ ಮೇಲೆ ರೂಪಿಸಲಾಗಿರುವ ತೌಲನಿಕ ಶಿಕ್ಷಣ ತಂತ್ರಗಳನ್ನು ಮುಖ್ಯವಾಗಿ ರಾಷ್ಟ್ರದ ಆರ್ಥಿಕ, ಔದ್ಯೋಗಿಕ ಮತ್ತು ಸಾಮಾಜಿಕ ಪ್ರಗತಿಗೆ ಅಗತ್ಯವಾದ ಜನಬಲವನ್ನು ಲೆಕ್ಕಹಾಕಿ ಸಕಾಲದಲ್ಲಿ ಶಿಕ್ಷಣವನ್ನು ಒದಗಿಸಲು ಆಯೋಜನಾ ಕ್ಷೇತ್ರ ಇದನ್ನು ಬಳಸಿಕೊಳ್ಳುತ್ತಿದೆ. ಮುಂದೆ, ಆಮುಂಬಿನಲ್ಲಿ ಉದ್ದೇಶಿತ ಗುರಿ ಮುಟ್ಟಿಸಲು ತೌಲನಿಕ ಶಿಕ್ಞಣ ಶಕ್ತವಾದಂತೆ ಅದೊಂದು ವಾಸ್ತವಿಕ ರೀತಿಯ ಅನ್ವಯಿಕ ವಿe್ಞÁನವಾಗಿ ಪರಿಣಮಿಸಬಹುದು. 

ಭಾರತದಲ್ಲಿ ತೌಲನಿಕ ಶಿಕ್ಷಣ: ಈ ಶತಮಾನದ ನಾಲ್ಕನೆಯ ದಶಕದಲ್ಲಿ ತೌಲನಿಕ ಶಿಕ್ಷಣದ ಅಧ್ಯಯನಕ್ಕೆ ಇಲ್ಲಿನ ಕೆಲವು ವಿಶ್ವವಿದ್ಯಾಲಯಗಳು ಬಿ. ಇಡಿ. ಮತ್ತು ಎಂ. ಇಡಿ ತರಗತಿಯ ಪಠ್ಯಕ್ರಮದಲ್ಲಿ ಅವಕಾಶ ಕಲ್ಪಿಸಿಕೊಂಡಿದ್ದವು. ಆದರೆ ಅದರ ವ್ಯಾಪ್ತಿ ತೀರ ಸೀಮಿತವಾಗಿದ್ದು ಇಂಗ್ಲೆಂಡ್, ಅಮೆರಿಕದ ಸಂಯುಕ್ತ ಸಂಸ್ಥಾನಗಳು ಮತ್ತು ಭಾರತ- ಈ ದೇಶಗಳ ಶಿಕ್ಷಣ ಪದ್ಧತಿಗಳ ವ್ಯಾಸಂಗವನ್ನು ಮಾತ್ರ ಒಳಗೊಂಡಿತ್ತು. ರಷ್ಯ, ಜರ್ಮನಿ, ಜಪಾನ್, ಚೀನ, ಮುಂತಾದವುಗಳ ಶಿಕ್ಷಣದ ಅಧ್ಯಯನಕ್ಕೆ ಅವಕಾಶವಿರಲಿಲ್ಲ. ಇದಕ್ಕೆ ರಾಜಕೀಯ ಕಾರಣಗಳಂತೆ ಇತರ ಕಾರಣಗಳೂ ಇದ್ದವು. ಅಂದು ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿಗಳು ಹೋಗುತ್ತಿದ್ದುದು ಇಂಗ್ಲೆಂಡ್ ಅಥವಾ ಅಮೆರಿಕಕ್ಕೆ ಮಾತ್ರ ; ಅವರು ಅಲ್ಲಿನ ಶಿಕ್ಷಣ ಪದ್ಧತಿಗಳನ್ನು ವ್ಯಾಸಂಗ ಮಾಡಿ ಬರುತ್ತಿದ್ದುದರಿಂದ ಇಲ್ಲೂ ಅವುಗಳ ಅಧ್ಯಯನಕ್ಕೆ ಅವಕಾಶ ಕಲ್ಪಿಸುತ್ತಿದ್ದರು. ಶಿಕ್ಷಣಕ್ಕಾಗಿ ಯಾರೂ ಕಮ್ಯೂನಿಸ್ಟ್ ರಾಷ್ಟ್ರಗಳಿಗೆ ಹೋಗುತ್ತಿರಲಿಲ್ಲ. ಆದ್ದರಿಂದ ಅಲ್ಲಿನ ಶಿಕ್ಷಣ ವ್ಯವಸ್ಥೆಯೇ ಮುಂತಾದ ವಿಷಯಗಳ ಬೋಧನೆಗೂ ಭಾರತದಲ್ಲಿ ಅವಕಾಶವಿರಲಿಲ್ಲ. ಜೊತೆಗೆ ಆ ದೇಶಗಳ ಶಿಕ್ಷಣ ಪದ್ಧತಿಗಳ ಬಗ್ಗೆ ವಾಸ್ತವ ಅಂಶಗಳನ್ನು ಒಳಗೊಂಡ ಸಾಹಿತ್ಯ ಕೃತಿಗಳೂ ಅಷ್ಟಾಗಿ ಪ್ರಕಟವಾಗಿರಲಿಲ್ಲ. ಇದ್ದ ಕೆಲವು ಕೃತಿಗಳು ರಷ್ಯನ್ ಅಥವಾ ಇತರ ಭಾಷೆಗಳಲ್ಲಿರುತ್ತಿದು ಆ ಭಾಷೆಗಳು ಭಾರತದಲ್ಲಿ ಬಳಕೆಯಲ್ಲಿರಲಿಲ್ಲ. ಜೊತೆಗೆ ಅಲ್ಲಿ ಶಿಕ್ಷಣ ಹೇಗೆ ವ್ಯವಸ್ಥೆಗೊಂಡಿದೆ ಎಂಬುದನ್ನು ತಿಳಿದುಕೊಳ್ಳಲೂ ಅಷ್ಟಾಗಿ ಅವಕಾಶವಿರಲಿಲ್ಲ. ಇವೆಲ್ಲ ಕಾರಣಗಳಿಂದ ಇಲ್ಲಿನ ಕಾಲೇಜುಗಳಲ್ಲಿ ಇಂಗ್ಲೆಂಡ್ ಮತ್ತು ಅಮೆರಿಕ ದೇಶಗಳ ಶಿಕ್ಷಣ ಪದ್ಧತಿಗಳ ಪರಿಷಯವೇ ತೌಲನಿಕ ಶಿಕ್ಷಣವೆಂಬ ಭಾವನೆಯಿತ್ತು. ಭಾರತಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಸ್ಥಿತಿ ಬದಲಾಯಿಸಿದೆ. ಫ್ರಾನ್ಸ್, ಜರ್ಮನಿ, ರಷ್ಯ, ಜಪಾನ್, ಮತ್ತಿತರ ದೇಶಗಳೊಡನೆ ಭಾರತದ ಸ್ನೇಹಸಂಪರ್ಕಗಳನ್ನು ಹೆಚ್ಚಿಸಿಕೊಂಡು ಆ ದೇಶಗಳ ಜನಜೀವನ, ಉದ್ಯೋಗ, ಸಮಾಜದ ಸ್ವರೂಪ, ಐತಿಹಾಸಿಕ ಸಂಪ್ರದಾಯಗಳು - ಇವೆಲ್ಲವನ್ನೂ ಆಧರಿಸಿ ರೂಪುಗೊಂಡಿರುವ ಆಯಾ ದೇಶದ ಶಿಕ್ಷಣ ಪದ್ಧತಿ ಇವೆಲ್ಲ ಪರಿಚಯವಾದವು. ಆ ಶಿಕ್ಷಣಪದ್ಧತಿಗಳನ್ನು ಕುರಿತ ಗ್ರಂಥಗಳೂ ಬರಲಾರಂಭಿಸಿದವು. ರಷ್ಯ, ಜಪಾನ್, ಯುಗೋಸ್ಲಾವಿಯ, ಫ್ರಾನ್ಸ್, ಚೀನ, ಮುತಾದ ದೇಶಗಳ ಶಿಕ್ಷಣ ಪದ್ಧತಿಗಳ ಅಧ್ಯಯನಕ್ಕೂ ಅವಕಾಶ ಕಲ್ಪನೆಯಾಯಿತು.

ಈ ಶತಮಾನದ ಕೊನೆಯ ಚತುಷ್ಟದಲ್ಲಿ ಭಾರತ ಆಫ್ರಿಕನ್ ರಾಷ್ಟ್ರಗಳೊಡನೆಯೂ ದಕ್ಷಿಣ ಅಮೇರಿಕದ ರಾಷ್ಟ್ರಗಳೊಡನೆಯೂ ಸಾಂಸ್ಕøತಿಕ, ತಾಂತ್ರಿಕ, ಆರ್ಥಿಕ, ಮತ್ತು ಔದ್ಯೋಗಿಕ ಸಂಬಂಧಗಳನ್ನು ಬೆಳಸಿಕೊಂಡು ಆ ದೇಶಗಳ ಅಭಿವೃದ್ಧಿಗಾಗಿ ಸಂಯುಕ್ತ ಉದ್ಯಮಗಳನ್ನು ಆರಂಭಿಸುತ್ತಿದೆ. ಇಲ್ಲಿನ ತಜ್ಞರು ಆ ದೇಶಗಳಿಗೆ ಹೋಗಿ ನೆರವು ನೀಡುತ್ತಿದ್ದಾರೆ. ಇದೆಲ್ಲ ಕಾರಣಗಳಿಂದ ಇನ್ನು ಮೇಲೆ ಭಾರತದ ವಿಶ್ವವಿದ್ಯಾಲಯಗಳೂ ಶಿಕ್ಷಕರ ಪ್ರಶಿಕ್ಷಣಸಂಸ್ಥೆಗಳೂ ಆಫ್ರಿಕದ ಹಾಗೂ ಲ್ಯಾಟಿನ ಅಮೆರಿಕದ ರಾಷ್ಟ್ರಗಳ ಶಿಕ್ಷಣ ಪದ್ಧತಿಯನ್ನು ಕುರಿತ ಅಧ್ಯಯನಕ್ಕೂ ಸಂಶೋಧನೆಗೂ ಅವಕಾಶ ಮಾಡಿಕೊಳ್ಳವುದು ಅನಿವಾರ್ಯವಾಗುತ್ತದೆ. ಆ ಮೂಲಕ ಭಾರತ ನೂತನವಾಗಿ ಸ್ವಾತಂತ್ರ್ಯ ಪಡೆದ ಹಿಂದುಳಿದ ರಾಷ್ಟ್ರಗಳ ಸಮಸ್ಯೆಗಳನ್ನು ಅರಿತು ನೆರವು ನೀಡಲು ಅನುಕೂಲವಾಗುವುದು.
(ಎನ್.ಎಸ್.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ